ಜೇಡುಶಿಲೆ
ಸೂಕ್ಷ್ಮಕಣಗಳಿಗಿಂತಲೂ ಸೂಕ್ಷ್ಮವಾದ ಆದರೆ ನಿರ್ದಿಷ್ಟವಾದ ಸ್ತರಗಳನ್ನೂ ವಿಶಿಷ್ಟ ಸೀಳುಪದರುಗಳನ್ನೂ ಪಡೆದಿರುವ ಒಂದು ಬಗೆಯ ಮಡ್ಡಿಶಿಲೆ (ಷೇಲ್). ಜೇಡುಶಿಲೆಯಲ್ಲಿ ಪ್ರಮುಖವಾಗಿ ಬೆಣಚು, ಜೇಡುಗಳು ಮತ್ತು ಇನ್ನಿತರ ಖನಿಜಗಳು ಸಾಮಾನ್ಯವಾಗಿ ಸಮ ಸಮವಾಗಿ ಬೆರೆತಿರುತ್ತವೆ. ಕ್ಯಾಲ್ಸಿಯಮ್ ಕಾರ್ಬೊನೇಟಿನ ಪ್ರಮಾಣ ಅರ್ಧಕ್ಕಿಂತ ಹೆಚ್ಚಾದರೆ ಆಗ ಅದನ್ನು ಮಾರ್ಲ್ ಎಂದು ಕರೆಯುತ್ತಾರೆ. ರಾಸಾಯನಿಕವಾಗಿ ಸಾಮಾನ್ಯ ಜೇಡುಶಿಲೆಯಲ್ಲಿ Siಔ2 (58%), ಂಟ2ಔ3 (15%), ಈeಔ ಮತ್ತು ಈe2ಔ3 (6%), ಒgಔ (2%), ಅಚಿಔ (6%), ಏ2ಔ (3%), ಓಚಿ2ಔ (1%), ಊ2ಔ (5%) ಮತ್ತು ಇತರ ಲೋಹಗಳ ಆಕ್ಸೈಡುಗಳು ಉಂಟು. ಜೇಡುಶಿಲೆಯ ರಾಸಾಯನಿಕ ಸಂಯೋಜನೆ ಕಣಗಳ ಅಳತೆ ಮತ್ತು ಶಿಲೆಯ ಬಣ್ಣಗಳೊಡನೆ ನಿಕಟ ಸಂಬಂಧ ಪಡೆದಿದೆ. ಜೇಡುಶಿಲೆಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಸೂಕ್ಷ್ಮಪರ್ಣಗಳನ್ನಾಗಿ ಸೀಳಬಹುದು. ಶಿಲೆಯಲ್ಲಿ ಇರುವ ಸೂಕ್ಷ್ಮ ಹಾಗೂ ಫಲಕಾಕಾರದ (ಪ್ಲೇಟ್) ಖನಿಜಗಳು ಒಂದಕ್ಕೊಂದು ಸಮಾಂತರವಾಗಿ ಹಾಗೂ ತಮ್ಮ ನೀಳ ಅಕ್ಷಗಳನ್ನು ಈ ದಿಕ್ಕಿನಲ್ಲಿ ಹೊಂದಿಸಿಕೊಂಡಿರುವುದೇ ಇದರ ಕಾರಣ.

	ಜೇಡುಶಿಲೆಗಳನ್ನು ವರ್ಗೀಕರಿಸುವ ರೀತಿಗೆ ವಿe್ಞÁನಿಗಳಲ್ಲಿ ಒಮ್ಮತವಿಲ್ಲ. ಕೆಲವರು ಅವುಗಳ ಖನಿಜಗಳನ್ನು ಆಧರಿಸಿ, ಕೆಲವರು ಅವುಗಳ ಬಣ್ಣಗಳನ್ನು ಆಧರಿಸಿ ವರ್ಗೀಕರಿಸುತ್ತಾರೆ. ಈ ಶಿಲೆಯ ಅತಿಸೂಕ್ಷ್ಮ ಕಣಗಳನ್ನು ಮತ್ತು ವ್ಯವಸ್ಥಿತವಾದ ಸ್ತರಗಳನ್ನು ಗಮನಿಸಿದರೆ ಜೇಡುಶಿಲೆಗಳು ಹೆಚ್ಚು ಶಾಂತವಾದ ಮತ್ತು ಕನಿಷ್ಠ 15 ಮೀಟರುಗಳಿಗಿಂತಲೂ ಹೆಚ್ಚು ಆಳವಾದ ಸಾಗರದ ತಳದಲ್ಲಿ ಸಂಚಯನಗೊಂಡಿರಬೇಕೆಂಬುದನ್ನು ಬಹುಶಃ ಎಲ್ಲ ವಿe್ಞÁನಿಗಳೂ ಒಪ್ಪುತ್ತಾರೆ. ಜೇಡುಶಿಲೆ ಅವ್ಯಾಪ್ಯ ಶಿಲೆ. ಆದ್ದರಿಂದ ಇದು ಅಂರ್ತಜಲ ಸಂಗ್ರಹಕ್ಕೆ ತುಲನಾತ್ಮಕವಾಗಿ ಯೋಗ್ಯವಾದ ಶಿಲೆ ಅಲ್ಲ; ಆದರೆ ಈ ಅವಗುಣವೇ ಕಲ್ಲಣ್ಣೆಯ ಸಂಗ್ರಹಕ್ಕೆ ಅಪೇಕ್ಷಾರ್ಹಗುಣವಾಗಿದೆ. ಬಹುಸಂಖ್ಯಾತ ಕಲ್ಲೆಣ್ಣೆಯ ಸಂಗ್ರಹಣಾ ರಚನೆಗಳಲ್ಲಿ ಜೇಡುಶಿಲೆ ಶಿರೋಶಿಲೆಯಾಗಿದೆ. ಇದು ನೈಸರ್ಗಿಕ ತೈಲ ಮತ್ತು ಅನಿಲಗಳ ಸಂಗ್ರಹಕ್ಕೆ ಬಲು ಸಹಕಾರಿಯಾಗಿದೆ.
(ಎಚ್.ಸಿ.ಎಸ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ